ಸೀರಿಯಲ್ ನಟಿಗೆ ಲೈಂಗಿಕ ಕಿರುಕುಳ – ಆರೋಪಿ ಬಂಧನ
: ಸೀರಿಯಲ್ ನಟಿಗೆ ಲೈಂಗಿಕ ಕಿರುಕುಳ – ಆರೋಪಿ ಬಂಧನ
: ಸಾಮಾಜಿಕ ಜಾಲತಾಣದ ಮೂಲಕ ಸೀರಿಯಲ್ ನಟಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಫೇಸ್‌ಬುಕ್‌ನಲ್ಲಿ ಗುಪ್ತಾಂಗದ ಫೋಟೋ ಮತ್ತು ಅಶ್ಲೀಲ ವಿಡಿಯೋ ಕಳುಹಿಸಿದ ಆರೋಪದ ಮೇರೆಗೆ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ತೆಲುಗು ಮತ್ತು ಕನ್ನಡ ಧಾರಾವಾಹಿಗಳಲ್ಲಿ ನಟಿಸಿರುವ ಯುವ ನಟಿಗೆ ಕಳೆದ ಮೂರು ತಿಂಗಳಿಂದ ಆರೋಪಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ತಿಳಿದುಬಂದಿದೆ.
ಮೊದಲು ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ ಆರೋಪಿ, ನಟಿಯು ಅದನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಮೆಸೆಂಜರ್ ಮೂಲಕ ಸಂದೇಶ ಕಳುಹಿಸಲು ಆರಂಭಿಸಿದ್ದ. ನಟಿಯು ಎಚ್ಚರಿಕೆ ನೀಡಿದರೂ, ಕಿರುಕುಳ ನಿಲ್ಲಿಸದೆ ಹೋದ ಕಾರಣ ಅವರನ್ನು ಬ್ಲಾಕ್ ಮಾಡಲಾಗಿತ್ತು.
ಆದರೆ ಆರೋಪಿ ಬೇರೆ ಖಾತೆಯಿಂದ ಮತ್ತೆ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳನ್ನು ಕಳುಹಿಸಿ ವಿಕೃತ ವರ್ತನೆ ತೋರಿದ್ದಾನೆ. ಈ ಕಿರುಕುಳದಿಂದ ಬೇಸತ್ತ ನಟಿಯು ನವೆಂಬರ್ 1ರಂದು ನಾಗರಭಾವಿಯ ನಂದನ್ ಪ್ಯಾಲೇಸ್ ಸಮೀಪ ಆರೋಪಿಯನ್ನು ನೇರವಾಗಿ ಭೇಟಿ ಮಾಡಿ, ಇಂತಹ ವರ್ತನೆ ನಿಲ್ಲಿಸಲು ಎಚ್ಚರಿಸಿದ್ದರು. ಆದರೂ ಕಿರುಕುಳ ಮುಂದುವರಿದ ಕಾರಣ, ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಬೆಂಗಳೂರು
ದೂರು ಸ್ವೀಕರಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.

Comments
Post a Comment